ಹೆದೆಯಲ್ಲಿದದ್ದು ಒಂದೇ ಮಾತು 
ಅ ಮಾತನ್ನು ಸಹ ನನ್ನ ಬಾಯಿ ಆಡದೆ ಹೋಯ್ತು 
ಕಣ್ನೂಳಗಿದ್ದದ್ದು ಒಂದೇ ಒಂದು ಚಿತ್ರ 
ಅ ಚಿತ್ರ ಎದುರಾದಾಗ ಕಣ್ಣು ರೆಪ್ಪೆಯನ್ನು ತೆರೆಯದೆ ಹೋಯ್ತು
ಮನದಾಳದ್ದಲ್ಲೀರುವುದು ಒಂದೇ ಒಂದು ಅಸೆ 
ಆ ಆಸೆಯನ್ನು ನನ್ನ ಮನ ಅರ್ಥ ಮಾಡಿಸದೆ ಹೋಯ್ತು 
ಆ ಅಸೆ ಆಸೆಯಾಗಿಯೇ ಉಳಿದು ಹೋಯ್ತು 
ಕಣ್ಮುಚ್ಚಿ, ಹೆದೆ ಬಿಚ್ಚಿ, ಮನ ನೊಂದು 
ಹೊರ ಬಂದದ್ದು, ನನ್ನ ಬಾಯಲ್ಲಿ ನಿಂದದ್ದು 
ಒಂದೇ ಒಂದು ಅರ್ಥವಾಗದ ಮುಗುಳ್ನಗೆ 
ಆ ಮುಗುಳ್ನಗೆಯ ಹಿಂದಿದ್ದದ್ದು 
ಚಿಂತಾಜನಕವಾದ ಮನ್ನಸ್ಸು 
ಮನ್ನಸ್ಸಿಗೆ ತಿಳಿ ಹೇಳುವರು ಯಾರಿಲ್ಲ 
ಆ ಚಿಂತೆಯ ಚಿಂತೆಯಾರಿಗಿಲ್ಲ 
ಯಾರಿಗೂ ಏನು ಹೇಳುವ ಅಧಿಕಾರ ಎನಗಿಲ್ಲ 
ಯಾಕೆಂದರೆ ಆ ಚಿಂತೆಗೆ ಉತ್ತರ ನನ್ನಲ್ಲೂ ಇಲ್ಲ...
Good one Manjula...
ReplyDelete